ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲವನ್ನು ಕೆಡವಿ ಹಾಕಬೇಕೆಂ ಕೂಗು ಎದ್ದಿದೆ. ದೇವಸ್ಥಾನ ಕೆಡವಿ ಹಾಕಬೇಕು. ದೇಗುಲ ಟ್ರಸ್ಟ್ ನಲ್ಲಿರುವ 60 ಲಕ್ಷ ರೂ. ಹಣವನ್ನು ಸಂತ್ರಸ್ತರ ಚಿಕಿತ್ಸೆಗೆ ಬಳಸಬೇಕು ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಒತ್ತಾಯಿಸಿದ್ದಾರೆ.ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣ ಹಾಗೂ ಸಂತ್ರಸ್ತರಿಗೆ ಸರ್ಕಾರ ಸವಲತ್ತು, ಪರಿಹಾರ ಸಂಬಂಧ ನಡೆದ ಸುಳ್ವಾಡಿ