ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿ. ಹೀಗಂತ ಘೋಷಣೆ ಮಾಡಿದವರು ಯಾರು ಗೊತ್ತಾ?ಚುನಾವಣೆಗೂ ಮುನ್ನವೇ ಸುಮಲತಾ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಬಿಂಬಿಸಿದ ಅಂಬಿ-ದರ್ಶನ್ ಅಭಿಮಾನಿಗಳು ಕಟೌಟ್ ಗಳನ್ನು ಕಟ್ಟಿದ್ದಾರೆ. ತಡಗವಾಡಿ ಗ್ರಾಮದ ಅಂಬಿ-ದರ್ಶನ್ ಅಭಿಮಾನಿಗಳು, ಗ್ರಾಮದಲ್ಲಿ ಫ್ಲೆಕ್ಸ್ ಹಾಕಿದ್ದಾರೆ. ಅದರಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸ್ವಾಗತ ಎಂದು ಬರೆದಿದ್ದಾರೆ. ಸ್ವಾಗತ ಕೋರಿ ಅಳವಡಿಸಿರುವ ಫ್ಲೆಕ್ಸ್ ನ ವಿಷಯ ಚರ್ಚೆಗೆ ಕಾರಣವಾಗಿದೆ. ಸುಮಲತಾ ಜೊತೆಗೆ ರಾರಾಜಿಸುತ್ತಿರುವ ದರ್ಶನ್,