ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದ ಸುಮಲತಾ ಆಯೋಗಕ್ಕೆ ದೂರು

ಮಂಡ್ಯ, ಮಂಗಳವಾರ, 26 ಮಾರ್ಚ್ 2019 (09:42 IST)

ಮಂಡ್ಯ: ಮಂಡ್ಯ ಲೋಕಸಭೆ ಚುನಾವಣಾ ಕಣ ರಂಗೇರುತ್ತಿದ್ದು, ತಮ್ಮ ವಿರುದ್ಧ ಪರೋಕ್ಷ ಸಮರ ಸಾರಿರುವ ಸಿಎಂ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.


 
ಮುಖ್ಯಮಂತ್ರಿಗಳು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನನ್ನ ಮನೆ ಬಳಿ ಗುಪ್ತಚರ ಹಾಗೂ ಪೊಲೀಸರನ್ನು ಬಿಟ್ಟಿದ್ದಾರೆ. ನಮ್ಮ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ. ನಾವು ಮಂಡ್ಯದಲ್ಲಿ ಸಮಾವೇಶ ನಡೆಸುವಾಗ ಕೇಬಲ್, ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ ಎಂದು ಸುಮಲತಾ ದೂರಿದ್ದಾರೆ.
 
ಈ ಬಗ್ಗೆ ಫೇಸ್ ಬುಕ್ ನಲ್ಲಿ ಕೂಡಾ ಪೋಸ್ಟ್ ಮಾಡಿರುವ ಸುಮಲತಾ ನಾನು ಸೌಮ್ಯವಾಗಿ ಪ್ರೀತಿಯಿಂದ ಭಾರತೀಯ ಪ್ರಜಾಪ್ರಭುತ್ವದ ಘನತೆಯನ್ನು ಮನದಲ್ಲಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ನನ್ನ ಆದರ್ಶಗಳನ್ನು ಮಂಡ್ಯದ ಜನ ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಬರೆದುಕೊಂಡಿದ್ದಾರೆ.
 
ಅಷ್ಟೇ ಅಲ್ಲ, ತಮ್ಮ ಪರ ಪ್ರಚಾರ ಮಾಡುತ್ತಿರುವ ದರ್ಶನ್, ಯಶ್ ಬಗ್ಗೆ ಕೀಳುಮಟ್ಟದಲ್ಲಿ ಹೇಳಿಕೆ ನೀಡುತ್ತಿರುವ ಜೆಡಿಎಸ್ ನಾಯಕರ ವಿರುದ್ಧವೂ ಕಿಡಿ ಕಾರಿರುವ ಸುಮಲತಾ ಇಂತಹದ್ದಕ್ಕೆಲ್ಲಾ ನಾವು ಜಗ್ಗಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯೂ ಟರ್ನ್ ಹೊಡೆದ ಜನಾರ್ಧನ್ ಪೂಜಾರಿ

ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತವಾಗಿದೆ ...

news

ಅಲ್ಲಿ ನಾಮಪತ್ರ ಭರಾಟೆ, ಇಲ್ಲಿ ಬಣ್ಣದಾಟ ಸಡಗರ

ರಾಜ್ಯದೆಲ್ಲೆಡೆ ಚುನಾವಣೆ ಕಾವು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ರೆ, ವಾಣಿಜ್ಯ ನಗರಿಯಲ್ಲಿನ ಜನರು ...

news

ಸೌಂಡ್ ಮಾಡಿದ 'ಮೈ ಭೀ ಚೌಕೀದಾರ್ ಅಭಿಯಾನ'

ಬಿಜೆಪಿ ವತಿಯಿಂದ 'ಮೈ ಭೀ ಚೌಕೀದಾರ್ ಅಭಿಯಾನ' ಬಿಸಿಲೂರಿನಲ್ಲಿ ನಡೆಯಿತು.

news

ಒಕ್ಕಲಿಗರಿಗೆ ಮಾಜಿ ಸಿಎಂ ಖಡಕ್ಕಾಗಿ ಹೇಳಿದ್ದೇನು?

ರಾಜಕೀಯ ಅಖಾಡದಲ್ಲಿ ತರಹೇವಾರಿ ಘಟನೆಗಳು ನಡೆಯುತ್ತಿದ್ದರೆ ಇದರ ನಡುವೆಯೂ ಜಾತಿಯೂ ಪ್ರಧಾನ ಪಾತ್ರ ...