ಮಂಡ್ಯ: ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದು ಇಲ್ಲ ಸಲ್ಲದ ಸ್ಟೇಟಸ್ ಹಾಕಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮತ್ತೆ ಕಿಡಿಗೇಡಿಗಳು ಶುರುಮಾಡಿಕೊಂಡಿದ್ದಾರೆ.ಹಿಂದೊಮ್ಮೆ ಇದೇ ರೀತಿ ಸುಮಲತಾ ಈ ರೀತಿ ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಪಪ್ರಚಾರ ಮಾಡಲು ಯತ್ನಿಸುವವರ ವಿರುದ್ಧ ಎಚ್ಚರಿಕೆ ನೀಡಿದ್ದರು. ಅಲ್ಲದೆ, ತಮ್ಮ ಅಧಿಕೃತ ಟ್ವಿಟರ್ ಖಾತೆ ಮತ್ತು ಫೇಸ್ ಬುಕ್ ಖಾತೆ ನೀಲಿ