ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಡುವೆ ನಡೆದಿರುವ ಮಾತಿನ ಚಕಮಕಿಗೆ ನಿಜ ಕಾರಣ ಅಕ್ರಮ ಗಣಿಗಾರಿಕೆ ಬಗ್ಗೆ ಸುಮಲತಾ ಮಾತನಾಡಿರುವುದು ಎನ್ನಲಾಗಿದೆ. ಈ ಮಾತಿನ ಚಕಮಕಿಗೆ ಮೂಲವಾಗಿದ್ದು ಸುಮಲತಾ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್ ಎಸ್ ಜಲಾಶಯಕ್ಕೆ ಹಾನಿಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದು. ಜಲಾಶಯದಲ್ಲಿ ಬಿರುಕಿನ ವಿಚಾರವನ್ನು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಲು ಸ್ಥಳೀಯ ನಾಯಕರು ಬಿಡುತ್ತಿಲ್ಲ ಎಂದು ಸುಮಲತಾ ಪರೋಕ್ಷವಾಗಿ