ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿಯೆತ್ತಿದ ಸುಮಲತಾ ಅಂಬರೀಶ್

ಬೆಂಗಳೂರು| Krishnaveni K| Last Modified ಶನಿವಾರ, 23 ಜನವರಿ 2021 (09:26 IST)
ಬೆಂಗಳೂರು: ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಸ್ಪೋಟದಿಂದಾಗಿ ಸಾವನ್ನಪ್ಪಿದ ಕಾರ್ಮಿಕರಿಗೆ ಸಂತಾಪ ವ್ಯಕ್ತಪಡಿಸಿರುವ ಸಂಸದೆ ಸುಮಲತಾ ಅಂಬರೀಶ್ ಅಕ್ರಮ ಗಣಿಗಾರಿಕೆ ವಿರುದ್ಧ ಧ‍್ವನಿಯೆತ್ತಿದ್ದಾರೆ.

 
ಇಂತಹ ಘಟನೆಗಳಿಗೆ ಗಣಿ ಮಾಲಿಕರ ಬೇಜವಾಬ್ಧಾರಿಯುತ ವರ್ತನೆಯೇ ಕಾರಣ ಎಂದಿರುವ ಸುಮಲತಾ ಮಂಡ್ಯ ಜಿಲ್ಲೆಯಲ್ಲೂ ಇಂತಹ ಅಕ್ರಮ ಗಣಿಗಾರಿಕೆ ವಿರುದ್ಧ ನಾನು ಇದೇ ಕಾರಣಕ್ಕೆ ಸತತವಾಗಿ ಧ‍್ವನಿಯೆತ್ತುತ್ತಿದ್ದೇನೆ.  ಇಂತಹ ಅಕ್ರಮಗಳಿಗೆ ಬಹಳಷ್ಟು ಬಾರಿ ರಾಜಕಾರಣಿ, ಭ್ರಷ್ಟ ಅಧಿಕಾರಿಗಳ ಸಹಕಾರವಿರುತ್ತದೆ. ಸರಕಾರ ಈ ಕೂಡಲೇ ಜಿಲ್ಲಾಡಳಿತಗಳಿಗೆ ಇಂತಹ ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :