ಲೋಕಸಭಾ ಕ್ಷೇತ್ರದಲ್ಲಿ ದೋಸ್ತಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಸುಮಲತಾ ಅಂಬರೀಶ್ರನ್ನ ಕಣಕ್ಕಿಳಿಸುವಂತೆ ಜಿಲ್ಲಾ ಮುಖಂಡರು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ.ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ನಿರಂತರವಾಗಿ ಸುಮಲತಾ ಅಂಬರೀಶ್ ಮೇಲೆ ಒತ್ತಡ ತರುತ್ತಿದ್ದಾರೆ. ನಿತ್ಯ ಬೆಂಗಳೂರಿನಲ್ಲಿರುವ ಅಂಬರೀಶ್ ನಿವಾಸಕ್ಕೆ ಆಗಮಿಸುತ್ತಿರುವ ಕೈ ಕಾರ್ಯಕರ್ತರು ಸುಮಲತಾ ಅವರ ಮನವೊಲಿಕೆಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅಂಬರೀಶ್, ಅಂಬರೀಶ್ ಕಾಂಗ್ರೆಸ್ ನಿಂದ ಗುರುತಿಸಿಕೊಂಡವರು. ಹಲವು ವರ್ಷ ಕಾಂಗ್ರೆಸ್ನಲ್ಲೇ ಇದ್ದವರು.