ಮಂಡ್ಯ: ಸಂಸದರ ಅಭಿವೃದ್ಧಿ ನಿಧಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲು ದೇಣಿಗೆ ನೀಡಿದ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ನೀಡಿದ ಕಿಡಿಗೇಡಿಗಳಿಗೆ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ. ಈ ಸಂಸದರೆಲ್ಲಾ 1 ಕೋಟಿ ರೂ. ನೀಡುತ್ತಿರುವುದು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ. ಸ್ವಂತ ಜೇಬಿನಿಂದಲ್ಲ. ಚುನಾವಣೆಗೆ ಕೋಟಿ ಕೋಟಿ ಖರ್ಚು ಮಾಡುವ ರಾಜಕಾರಣಿಗಳು ಈಗ ನಮ್ಮ ಹಣಕ್ಕೆ ಕೈ ಹಾಕಿದ್ದಾರೆ ಎಂದು ವ್ಯಕ್ತಿಯೊಬ್ಬ ಟಾಂಗ್ ನೀಡಿದ್ದ.ಇದಕ್ಕೆ