ಈದ್ಗಾ ಮೊಹಲ್ಲಾಕ್ಕೆ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದಾರೆ. ಮಂಡ್ಯ ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್ ರವರು ಮಳವಳ್ಳಿ ತಾಲೂಕಿನಲ್ಲಿ ಕೊರೊನಾ ಸೋಂಕಿನಿಂದ ನಿರ್ಬಂಧಿತ ಪ್ರದೇಶವಾದ ಈದ್ಗಾ ಮೊಹಲ್ಲಾಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳವಳ್ಳಿ ತಾಲೂಕಿನ ಉಗ್ರಾಣಪುರದ ದೊಡ್ಡಿ ನಿವಾಸಿಗಳಿಗೆ ಉಚಿತವಾಗಿ ಆಹಾರ ಸಾಮಾಗ್ರಿಗಳ ಒಳಗೊಂಡ ದಿನಸಿ ಕಿಟ್, ಎಲೆಕೋಸು, ದಪ್ಪಮೆಣಸಿನಕಾಯಿ ವಿತರಿಸಿದರು. ಮಳವಳ್ಳಿ ತಾಲ್ಲೂಕಿನ ಸರ್ಕಾರಿ ಅತಿಥಿಗೃಹದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಕೊರೊನಾ