ಭವಿಷ್ಯದ ರಾಜಕಾರಣಕ್ಕಾಗಿ ಕೈ ಹಿಡಿಯುತ್ತಾರಾ ನೂತನ ಸಂಸದೆ..? ಎನ್ನುವ ಪ್ರಶ್ನೆಗಳು ಕೇಳಿಬರಲಾರಂಭಿಸಿವೆ.ಮಂಡ್ಯದಲ್ಲಿ ಸುಮಲತಾ ಕಾಂಗ್ರೆಸ್ ಸೇರುವ ಸುಳಿವು ನೀಡುತ್ತಿವೆ ಫ್ಲೆಕ್ಸ್, ಕಟೌಟ್ ಗಳು.ಕಾಂಗ್ರೆಸ್ ರಾಜ್ಯ, ಜಿಲ್ಲಾ ಮುಖಂಡರೊಂದಿಗೆ ರಾರಾಜಿಸುತ್ತಿವೆ ಸುಮಲತಾ ಭಾವಚಿತ್ರ.ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಕೈ ಮುಖಂಡರ ಭಾವಚಿತ್ರದ ಜೊತೆ ಸುಮಲತಾ ಚಿತ್ರವಿದೆ.ಉಚ್ಛಾಟಿತ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಫೋಟೊ ಮಿಂಚಿಂಗ್ ನಲ್ಲಿದ್ದಾರೆ.ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹುಟ್ಟು ಹಬ್ಬಕ್ಕೆ ಶುಭಕೋರಿ ಮಂಡ್ಯ ಜಿಲ್ಲಾದ್ಯಂತ ಫ್ಲೆಕ್ಸ್ ಅಳವಡಿಕೆ