ಗಂಡ ಸತ್ತ ಹೆಣ್ಮಕ್ಕಳು ಆಚೆ ಬರಬಾರದಾ? ರಾಜಕೀಯಕ್ಕೆ ಬರಬಾರದಾ? ಸಚಿವ ರೇವಣ್ಣನ ಅಸಂಬದ್ಧ ಹೇಳಿಕೆ ಮತ್ತು ಕೀಳು ಮಟ್ಟದ ಮಾತುಗಳಿಗೆ ಅವರು ಕ್ಷಮೆ ಕೇಳಬೇಕೆಂದು ಬಿಜೆಪಿ ಸಂಸದೆ ಆಗ್ರಹ ಮಾಡಿದ್ದಾರೆ.ಮಂಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು, ಸುಮಲತಾ ಅವರು ಕನ್ನಡದ ಮಗಳು, ಕನ್ನಡದ ಸೊಸೆಯಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಇಲ್ಲೇ ನೆಲೆಸಿ ನನ್ನ ರಾಜ್ಯ ಅಂತ ಇಲ್ಲಿದ್ದಾರೆ. ಅಂಬರೀಶ್ ಸತ್ತಾಗ ರೇವಣ್ಣ ನಡೆದುಕೊಂಡ ರೀತಿ ಹಾಗಾದ್ರೆ ಮೊಸಳೆ ಕಣ್ಣೀರಾ?