ನಟ ಯಶ್ ಮತ್ತು ದರ್ಶನ್ ಅವರ ಎಲ್ಲ ಅಭಿಮಾನಿಗಳು ಮತಗಳಾಗಿ ಬರುತ್ತವೆ ಎಂಬ ನಂಬಿಕೆಯಿಲ್ಲ. ಹೀಗಂತ ಸುಮಲತಾ ಹೇಳಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿ ಮಹಿಳೆಯಾಗಿ ಎದುರಿಸುತ್ತಿದ್ದೇನೆ. ಸರ್ಕಾರದ ವಿರುದ್ಧ ಹೋರಾಡಲು ಅನಿವಾರ್ಯವಾಗಿ ಪಕ್ಷೇತರರಾಗಿ ನಿಂತರೆ ಎಲ್ಲಾ ಪಕ್ಷಗಳಿಂದ ಸಹಕಾರ ಸಿಗಲಿದೆ ಎಂಬ ಸಂದೇಶ ಬಂತು. ಯಾವುದೇ ಪಕ್ಷವನ್ನು ಸೇರಬಹುದಿತ್ತು. ಆದರೂ ನಾನು ಈ ತೀರ್ಮಾನ ಕೈಗೊಂಡೆ. ಜನಾಭಿಪ್ರಾಯಕ್ಕೆ ಬೆಲೆಕೊಟ್ಟು ತೀರ್ಮಾನಕ್ಕೆ ಬಂದೆ ಎಂದರು.ಬೇಷರತ್ತು ಬೆಂಬಲ