ಮಂಡ್ಯ : ಸಂಸದೆ ಸುಮಲತಾ ಯಾವ ಪಕ್ಷ ಸೇರುತ್ತಾರೆ ಎಂಬ ಚರ್ಚೆಗಳು ಜೋರಾಗಿದೆ. ಈ ಹೊತ್ತಿನಲ್ಲಿಯೇ ಸಂಸದೆ ಸುಮಲತಾ ಬೆಂಬಲಿಗರು ಹಾಗೂ ಅಭಿಮಾನಿಗಳು ಮಹತ್ವದ ಸಭೆಯನ್ನ ಮಂಗಳವಾರ ಕರೆದಿದ್ದು, ಎಲ್ಲರ ಚಿತ್ತ ಆ ಸಭೆಯತ್ತ ನೆಟ್ಟಿದೆ.ಸುಮಲತಾ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಬಿಜೆಪಿ, ರಾಜ್ಯ ರೈತ ಸಂಘ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಿಂದೆ ನಿಂತು ಸುಮಲತಾ ಗೆಲುವಿಗೆ ಕಾರಣರಾಗಿದ್ದರು.ಸದ್ಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ