ಆಸ್ತಿ ವಿಚಾರಕ್ಕೆ ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿದೆ. ನಾರಾಯಣಸ್ವಾಮಿ ಕೊಲೆಯಾದ ತಂದೆ. ಆರೋಪಿ ಮಣಿಕಂಠ ಸುಪಾರಿ ನೀಡಿರುವ ಪುತ್ರ. ಬೆಂಗಳೂರಿನ ಮಾರತ್ತಹಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಕಂಠ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದು 2ನೇ ವಿವಾಹವಾಗಿದ್ದ, ಒಬ್ಬ ಹೆಣ್ಣು ಮಗಳಿದ್ದಳು. ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ.