ನೂರಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ: ಬಂದ್ ಯಶಸ್ವಿ

ಕುಂದಾಪುರ, ಶುಕ್ರವಾರ, 7 ಡಿಸೆಂಬರ್ 2018 (15:47 IST)

ಟೋಲ್ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಕರೆ ನೀಡಲಾಗಿದ್ದ ಬಂದ್ ಗೆ ನೂರಕ್ಕೂ ಹೆಚ್ಚು ಸಂಘ, ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ಪರಿಣಾಮ ಬಂದ್ ಬಹುತೇಕ ಯಶಸ್ವಿಯಾಗಿದೆ.

ಟೋಲ್ ಸಮಸ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಕೋಟ ಬಂದ್ ಕರೆ ನೀಡಿರುವುದು ಯಶಸ್ವಿಯಾಗಿದೆ.
ಮಾಬುಕಳದಿಂದ ಮಣೂರು ತನಕ ಬಂದ್ ಮಾಡಲಾಗಿತ್ತು. ಅಂದಾಜು 15 ಕಿ.ಮೀ. ಸಂಪೂರ್ಣ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.

ಸಾಸ್ತಾನ, ಕೋಟ, ಸಾಲಿಗ್ರಾಮ, ಮಣೂರು ತನಕ ಬಂದ್ ಯಶಸ್ವಿಯಾಗಿದೆ. ಸ್ವಯಂಪ್ರೇರಿತವಾಗಿ ಬಂದ್ ನಡೆಸಿ ಟೋಲ್ ವಿರುದ್ಧ ಹೋರಾಟವನ್ನು ಅಲ್ಲಿನ ಜನರು ತೀವ್ರಗೊಳಿಸಿದ್ದಾರೆ.

ಸಾಸ್ತಾನ ಟೋಲ್ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಬಂದ್ ನಲ್ಲಿ ಭಾಗಿಯಾಗಿದ್ದರು. ನೂರನಲವತ್ತು ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಸಾಥ್ ನೀಡಿವೆ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶೃಂಗೇರಿ ಶಾರದಾಂಬೆ ದರ್ಶನ ಪಡೆದ ಸಿಎಂ

ಶೃಂಗೇರಿ ಶಾರದಾಂಬೆ ದರ್ಶನವನ್ನು ಮುಖ್ಯಮಂತ್ರಿ ಪಡೆದುಕೊಂಡಿದ್ದಾರೆ.

news

ಡಿ.22 ಕ್ಕೆ ಸರ್ಕಾರದ ಪತನ ಖಚಿತ- ಶಾಸಕ ಬಸನಗೌಡ ಪಾಟೀಲ್ ಭವಿಷ್ಯ

ವಿಜಯಪುರ : ಡಿ.22ಕ್ಕೆ ಸಚಿವ ಸಂಪುಟ ವಿಸ್ತರಣೆ ನಿಶ್ಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿರುವ ...

news

ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ವಾಗ್ದಾಳಿ

ನವದೆಹಲಿ : ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ...

news

ಬ್ಲೂವೇಲ್ ಗೇಮ್ ಗೆ 17 ವರ್ಷದ ಬಾಲಕಿ ಬಲಿ

ನಾಗ್ಪುರ : ಅಪಾಯಕಾರಿ ಬ್ಲೂವೇಲ್ ಗೇಮ್ ಗೆ ಇದೀಗ 17 ವರ್ಷದ ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ...