ಅನ್ ಲಾಕ್ ಬಳಿಕ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಿ

ಬೆಂಗಳೂರು| Krishnaveni K| Last Modified ಶುಕ್ರವಾರ, 11 ಜೂನ್ 2021 (09:00 IST)
ಬೆಂಗಳೂರು: ಲಾಕ್ ಡೌನ್, ಕೊರೋನಾದಿಂದಾಗಿ ಎಷ್ಟೋ ಜನ ಉದ್ಯೋಗವನ್ನೇ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅದರಲ್ಲೂ ಸಣ್ಣ ಉದ್ದಿಮೆಗಳು ಸಂಪೂರ್ಣ ನೆಲಕಚ್ಚಿವೆ. ಇಂತಹವರಿಗೆ ಈಗ ನಮ್ಮ ಸಹಾಯ ಬೇಕಾಗಿದೆ.

 
ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ. ನಮ್ಮ ದೈನಂದಿನ ಅಗತ್ಯಗಳಿಗೆ ನಾವು ಖರೀದಿ ಮಾಡುವಾಗ ಇಂತಹ ಸಣ್ಣ ವ್ಯಾಪಾರಿಗಳಿಂದ ಖರೀದಿ ಮಾಡಿದರೂ ಸಾಕು.
 
ಕೆಲವು ದಿನಗಳ ಮಟ್ಟಿಗೆ ಆನ್ ಲೈನ್ ಖರೀದಿ ಬಿಟ್ಟು, ಸಣ್ಣ ವ್ಯಾಪಾರಿಗಳು, ಬೀದಿ ಬದಿ ತರಕಾರಿ ಮಾರುವವರಿಂದ ಖರೀದಿ ಮಾಡಿದರೆ ಅವರ ಸ್ಥಿತಿಗತಿಯೂ ಸುಧಾರಿಸುತ್ತದೆ. ಕೊರೋನಾ ಬಳಿಕ ನಮ್ಮ ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದೆ. ಇಂತಹ ಸಂದರ್ಭದಲ್ಲಿ ನಿಜವಾಗಿಯೂ ದೇಶಕಟ್ಟಲು ಕೈ ಜೋಡಿಸಬೇಕೆಂದರೆ ಇಂತಹ ಸಣ್ಣ ಮಟ್ಟಿನ ನೆರವು ನೀಡಿದರೂ ಸಾಕು.
ಇದರಲ್ಲಿ ಇನ್ನಷ್ಟು ಓದಿ :