ಮೈತ್ರಿ ಸರಕಾರಕ್ಕೆ ಸವಾಲ್ ಎಸೆದು ರಾಜೀನಾಮೆ ನೀಡಿರೋ ಅತೃಪ್ತ ಶಾಸಕರ ಭವಿಷ್ಯ ಬುಧವಾರದಂದು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಿರ್ಧಾರಗೊಳ್ಳಲಿದೆ. ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠವು ಸುದೀರ್ಘ ವಿಚಾರಣೆ ನಡೆಸಿದೆ. ಬುಧವಾರದಂದು ತನ್ನ ತೀರ್ಮಾನ ಪ್ರಕಟ ಮಾಡೋದಾಗಿ ಕೋರ್ಟ್ ಹೇಳಿದೆ. ಅತೃಪ್ತ ಶಾಸಕರ ಪರವಾಗಿ ಮುಕುಲ್ ರೋಹಟಗಿ ವಾದ ಮಂಡನೆ ಮಾಡಿದರೆ, ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ರು. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರವಾಗಿ