ಬೆಂಗಳೂರು: ಕೊರೋನಾ ನಡುವೆಯೇ ಶಾಲೆಗಳು ಶುರುವಾಗಲಿದೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಜೂನ್ ಮಧ್ಯ ಭಾಗದಿಂದ 1 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಪಾಳಿಯ ಆಧಾರದಲ್ಲಿ ಶಾಲೆ ಆರಂಭವಾಗಲಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಹಲವು ಪೋಷಕರು ಶಿಕ್ಷಣ ಸಚಿವರ ಬಳಿ ಸಾಮಾಜಿಕ ಜಾಲತಾಣಗಳ ಮೂಲಕ ಆತಂಕ ವ್ಯಕ್ತಪಡಿಸಿದ್ದರು.ಈಗ ಶಾಲೆ ಶುರು ಮಾಡುವುದು ಮಕ್ಕಳ ಜೀವವನ್ನು ಅಪಾಯಕ್ಕೆ ದೂಡಿದಂತೆ ಎಂದು ಹಲವರು ಆತಂಕ