ಐಟಿ ದಾಳಿಗೆ ಮುನ್ನ ಕೇಂದ್ರ ಸಚಿವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನುವ ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಹುರುಳಿಲ್ಲ ಎಂದು ಬಿಜೆಪಿ ವಕ್ತಾರ, ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಷ್ಟೊಂದು ವಿವೇಚನೆ ಇಲ್ಲದಿರುವ ಕೇಂದ್ರ ಸಚಿವರು ಇಲ್ಲ. ಯಾರೊಬ್ಬ ಕೇಂದ್ರ ಸಚಿವರು ಡಿ.ಕೆ.ಶಿವಕುಮಾರ್ರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಭಾವಶಾಲಿ ಕೇಂದ್ರ ಸಚಿವರೊಬ್ಬರು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ಗೆ ಬಿಜೆಪಿಗೆ ಸೇರುವಂತೆ