ಜು. 20ರಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ: ಎಸ್. ಸುರೇಶ್‌ಕುಮಾರ್‌

bangalore| geethanjali| Last Modified ಶನಿವಾರ, 10 ಜುಲೈ 2021 (13:54 IST)
ಬೆಂಗಳೂರು: ‘ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಇದೇ 20ರ ವೇಳೆಗೆ ಪ್ರಕಟಿಸಲಾಗುವುದು‘ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದರು.
ದ್ವಿತೀಯ ಪಿಯುಸಿ ಫಲಿತಾಂಶವನ್ನು ಈ ಬಾರಿ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದಲ್ಲಿ ನಿರ್ಣಯಿಸುವುದರಿಂದ, ಈ ವಿದ್ಯಾರ್ಥಿಗಳಿಗೆ ತಮ್ಮ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಆನ್‌ಲೈನ್ ಮೂಲಕ ನೋಡಿ ಸರಿಪಡಿಸಿಕೊಳ್ಳಲು ಅವಕಾಶ ಇದೆ.
ಎಸ್‌ಟಿಎಸ್‌ ವೆಬ್‌ ಪೋರ್ಟಲ್‌ನಲ್ಲಿ https://sts.karnataka.gov.in/SATSPU/# ಈ ಲಿಂಕ್ ಬಳಸಿ ಅಂಕಗಳನ್ನು ಪರಿಶೀಲಿಸಬಹುದು.
ಈ ವೆಬ್ ಪೋರ್ಟಲ್‌ನಲ್ಲಿ ಇಲಾಖೆ ನೀಡಿರುವ ಎಸ್‌ಎಟಿಎಸ್ ಸಂಖ್ಯೆ ಅಥವಾ ಕಾಲೇಜಿನಲ್ಲಿ ನೀಡಿದ್ದ ವಿದ್ಯಾರ್ಥಿ ಸಂಖ್ಯೆ ಅಥವಾ ಪರೀಕ್ಷಾ ನೋಂದಣಿ ಸಂಖ್ಯೆ ಈ ಮೂರರಲ್ಲಿ ಯಾವುದಾದರೂ ಒಂದನ್ನು ನಮೂದಿಸಿ ಪರಿಶೀಲಿಸಬಹುದು.
ಫಲಿತಾಂಶದಲ್ಲಿ ಅಥವಾ ಅಂಕಗಳಲ್ಲಿ ವ್ಯತ್ಯಾಸಗಳಿದ್ದರೆ ತಮ್ಮ ಶಾಲೆ ಅಥವಾ ಕಾಲೇಜಿನ ಪ್ರಾಂಶುಪಾಲರನ್ನು ಇದೇ 12ರ ಒಳಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. ಪ್ರಾಂಶುಪಾಲರು ಅದನ್ನು ಸರಿಪಡಿಸಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :