ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ, ಕರ್ನಾಟಕವನ್ನ ಲೂಟಿ ಮಾಡುವುದೇ ಬಿಜೆಪಿಯವರ ಕುಲಕಸುಬು ಅಂತಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ರು. ಬಿಜೆಪಿಯೂ ಕರ್ನಾಟಕವನ್ನ ಭ್ರಷ್ಟಾಚಾರದ ಮಾದರಿಯನ್ನಾಗಿ ಮಾಡಿಕೊಂಡಿದ್ದಲ್ಲದೆ, 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದೇ ಪ್ರಸಿದ್ದಿ ಪಡೆದಿದೆ. ದೇಶದಲ್ಲಿ ಯಾರನ್ನೇ ಕೇಳಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಏನು ಅಂತಾ ಹೇಳ್ತಾರೆ. ಗುತ್ತಿಗೆದಾರ ಸಂತೋಷ ಪಾಟೀಲ್ 40 ಪರ್ಸೆಂಟ್ ಕಮೀಷನ್ ಬಗ್ಗೆ ಹೇಳಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬವನ್ನ ಕೇಳಿ