ಬರದಿಂದ ನಲುಗಿದ್ದ ಊರಿನಲ್ಲಿ ಇದೀಗ ಸಂತಸ ಮನೆ ಮಾಡಿದೆ. ಬರೋಬ್ಬರಿ ಎರಡು ದಶಕಗಳ ನಂತರ ಆ ಪ್ರದೇಶದಲ್ಲಿ ಕೆರೆಕೋಡಿಯಾಗಿರೋದು ಅನ್ನದಾತರಲ್ಲಿ ಹರ್ಷಕ್ಕೆ ಕಾರಣವಾಗಿದೆ. ಮಂಡ್ಯದ ನಾಗಮಂಗಲ ಸಮೀಪದ ದೇವಲಾಪುರ ಕೆರೆ ಸುಮಾರು 20 ವರುಷಗಳ ನಂತರ ಕೆರೆಕೊಡಿಯಾಗಿದೆ. ಬರಗಾಲದಲ್ಲಿ ನಲುಗಿಹೋಗಿದ್ದ ಈ ಪ್ರದೇಶದಲ್ಲಿ ದೇವಲಾಪುರ ಕೆರೆ ಇದುವರೆಗೆ ಮಳೆಯಾಗಿದ್ದರೂ ತುಂಬಿರಲಿಲ್ಲ.ಈಗ ಹೇಮಾವತಿ ಜಲಶಾಯದಿಂದ ನೀರುಬಿಟ್ಟಿರೋದ್ರಿಂದ ಕೆರೆ ಭರ್ತಿಯಾಗಿದೆ. ಸಹಜವಾಗಿಯೇ ರೈತರು ಹರ್ಷಗೊಂಡಿದ್ದಾರೆ.