ನವದೆಹಲಿ: ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ ಮಂಗಳೂರು ಮೂಲದ ನರ್ಸ್ ಸಹಾಯಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಧಾವಿಸಿದ್ದಾರೆ. ಮಾನವ ಕಳ್ಳ ಸಾಗಣಿಕೆ ಜಾಲಕ್ಕೆ ಸಿಲುಕಿ ಸೌದಿಗೆ ಮಾರಾಟವಾಗಿದ್ದ ಜೆಸಿಂತಾ ಮೆಂಡೋನ್ಸಾ ಎಂಬ ಮಹಿಳೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದವರು. ಮಧ್ಯವರ್ತಿಯ ಆಮಿಷಕ್ಕೆ ಬಲಿಯಾಗಿ ಸೌದಿಗೆ ಹೋಗಿದ್ದ ಆಕೆಗೆ ನಂತರ ತಾನು ಮೋಸದ ಜಾಲಕ್ಕೆ ಬಲಿಯಾಗಿದ್ದೇನೆ ಎಂದು ಅರಿವಾಗಿದೆ.ವಿಷಯ ತಿಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೌದಿಯಲ್ಲಿರುವ ಭಾರತೀಯ ರಾಯಭಾರಿ