ಚೋಟಾ ಮುಂಬಯಿ ಖ್ಯಾತಿಯ ನಗರಿಯಲ್ಲಿ ಹಾಡಹಗಲಲ್ಲೇ ಗಾಂಜಾ ಮಾರಾಟ ನಡೆಯುತ್ತಿದೆ.ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನನ್ನು ಮನೋಜ ಚಂಪಕಲಾಲ್ ಜೈನ್ ಎಂದು ಗುರುತಿಸಲಾಗಿದೆ. ತಳವಾರ ಓಣಿಯ ರಸ್ತೆ ಬದಿ ನಿಂತು ಗಾಂಜಾ ಮಾರುತ್ತಿದ್ದ ಆರೋಪಿಯನ್ನು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ಸಪೆಕ್ಟರ್ ಪ್ರಭು ಸುರಿನ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಗಾಂಜಾ ಮಾರುತ್ತಿದ್ದ ಮನೋಜನಿಂದ