ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್`ಐಟಿ ತನಿಖೆ ತೀವ್ರಗೊಳಿಸಿದೆ. ಸಿಸಿಟಿವಿ ಮತ್ತು ಫೋನ್ ಕರೆಗಳ ಲೊಕೇಶನ್ ಆಧರಿಸಿ ಪೊಲೀಸರು ಆಂಧ್ರ ಮೂಲದ ಅನುಮಾನಾಸ್ಪದ ವ್ಯಕ್ತಿಯನ್ನ ಬಂಧಿಸಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಗೌರಿ ಲಂಕೇಶ್ ಅವರ ಗಾಂಧಿಬಜಾರ್ ಕಚೇರಿಯಿಂದ ಅವರ ರಾಜರಾಜೇಶ್ವರಿ ನಗರದ ಮನೆವರೆಗಿನ ಸಿಸಿಟಿವಿ ದೃಶ್ಯಾವಳಿ. 3 ತಿಂಗಳ ಕಾಲ ಅವರು ಸಂಚರಿಸಿದ ಮಾರ್ಗದ 1800 ಸಿಸಿಟಿವಿ ವಿಡಿಯೋಗಳನ್ನ ವಶಕ್ಕೆ ಪಡೆದ ಎಸ್ಐಟಿ ವಿಚಾರಣೆ ನಡೆಸುತ್ತಿದೆ.