ರೆಸ್ಟೋರೆಂಟ್ ಒಂದು ಅವಧಿ ಮೀರಿ ಓಪನ್ ಆಗಿದ್ದಕ್ಕೆ ಕೆ ಆರ್ ಪುರ ಇನ್ಸ್ಪೆಕ್ಟರ್ ನಂದಿಶ್ ರನ್ನ ಸಸ್ಪೆಂಡ್ ಮಾಡಲಾಗಿತ್ತು. ಇದೇ ನೋವಿನಲ್ಲಿದ್ದ ಇನ್ಸ್ಪೆಕ್ಟರ್ ಹಿರಿಯ ಅಧಿಕಾರಿಗಳಿಗೆ ತನ್ನದೇನು ತಪ್ಪಿಲ್ಲ ನೈಟ್ ರೌಂಡ್ ನಲ್ಲಿದ್ದ ಅಧಿಕಾರಿ ಸಿಬ್ಬಂದಿ ರೆಸ್ಟೋರೆಂಟ್ ಮುಚ್ಚಿಸಿಲ್ಲ ಎಂದು ಮನವಿ ಮಾಡಿದ್ರೂ ಹಿರಿಯ ಅಧಿಕಾರಿಗಳು ನಂದೀಶ್ ಮಾತಿಗೆ ಸೊಪ್ಪು ಹಾಕಿರ್ಲಿಲ್ಲ. ಈ ಕರಾಣಕ್ಕೆ ಕಳೆದ ಒಂದು ವಾರದ ಹಿಂದೆ ಅಮಾನತು ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ರು.