ರಾಶಿ ರಾಶಿ ಸತ್ತು ಗಬ್ಬುನಾರುತ್ತಿರುವ ಮೀನುಗಳು, ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಸ್ಥಳೀಯರು, ರೋಗಗ್ರಸ್ಥ ಮೀನುಗಳನ್ನು ಹಿಡಿಯಲು ಮುಗಿಬಿದ್ದಿರುವ ಜನರು ಈ ದೃಶ್ಯಗಳು ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಅತಿದೊಡ್ಡ ಕಂದವಾರ ಕೆರೆಯಲ್ಲಿ ಕಂಡುಬಂದಿದೆ. ಹೆಚ್ ಎನ್ ವ್ಯಾಲಿ ಮತ್ತು ಇತ್ತೀಚೆಗೆ ಸುರಿದ ಬಾರಿ ಮಳೆಗೆ ಕೆರೆ ತುಂಬಿ ನಳನಳಿಸುತ್ತಿದೆ . ಎರಡು ಮೂರು ಬಾರಿ ಕೋಡಿಹೋಗಿದ್ದು ,ಕೋಡಿ ಹೋದ ಕೆರೆ ನೀರಿನಲ್ಲಿ ಮೀನುಗಳು ಕೊಚ್ಚಿಬಂದಿದ್ವು ,ಅದ್ಯಾಕೋ ಏನೋ ಕೆರೆ ನಾಲೆಯಲ್ಲಿ