ಲೋಕ ಕಲ್ಯಾಣಕ್ಕೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದ ಗಡ್ಡಿ ಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ಸದ್ಭಾವನಾ ಪಾದಯಾತ್ರೆಯನ್ನು ಕೋಡಾಲ ಗ್ರಾಮದಿಂದ ವಿವಿಧ ಮಾರ್ಗವಾಗಿ ಸಂಗಮ ಗ್ರಾಮದ ಸಂಗಮೇಶ್ವರ ಮಂದಿರದ ವರೆಗೆ ಪಾದಯಾತ್ರೆ ನಡೆಸಿದರು.ಈ ವೇಳೆ ದಾರಿಯುದ್ದಕ್ಕೂ ಭಕ್ತರು ಸ್ವಾಮೀಜಿಗಳ ಜೋಳಿಗೆಗೆ ಹಣ ಹಾಕಿ ಭಕ್ತಿ ಮೆರೆದಿದ್ದರು. ಈ ಬಾರಿ ಸ್ವಾಮೀಜಿಗಳು ಕೊಡಗು ಜನರ ಸಂಕಷ್ಟಕ್ಕೆ ಸ್ಪಂಧಿಸುವ ಕೆಲಸ ಮಾಡಿದ್ದಾರೆ. ಪಾದಯಾತ್ರೆಯನ್ನು ಸಂಗಮ ಗ್ರಾಮದ ಸಂಗಮೇಶ್ವರ