ಕೋಮು ಸಾಮರಸ್ಯಕ್ಕೆ ಹಲವು ಜ್ವಲಂತ ನಿದರ್ಶನಗಳು ರಾಜ್ಯದಲ್ಲಿವೆ. ಆ ಸಾಲಿಗೆ ಈ ಸ್ವಾಮೀಜಿ ಹೊಸ ಸೇರ್ಪಡೆ. ಬಳ್ಳಾರಿ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಮಸೀದಿಯನ್ನು ಸ್ವಾಮೀಜಿಯೊಬ್ಬರು ಉದ್ಘಾಟನೆ ಮಾಡಿದ್ದಾರೆ. ಸಿರುಗುಪ್ಪದ ಟಿ.ರಾಂಪುರ ಹಳ್ಳಿಯಲ್ಲಿ ನಿರ್ಮಾಣ ಮಾಡಿರುವ ಮಸೀದಿಯನ್ನುಹಾಲ್ವಿ ಮಠದ ಮಹಂತ ಶ್ರೀಗಳು ಉದ್ಘಾಟನೆ ಮಾಡಿ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಮಾಜಿ ಶಾಸಕ ಎಂ.ಬಿ.ನಾಗರಾಜ್, ಗ್ರಾಮಸ್ಥರು ಹಾಗೂ ಮುಖಂಡರು ಈ ವಿಶಿಷ್ಟ ಸಮಾರಂಭಕ್ಕೆ ಸಾಕ್ಷಿಯಾದರು.