ಬೆಂಗಳೂರು: ಹುಣಸಮಾರನಹಳ್ಳಿಯ ವೀರಶೈವ ಮಠದ ಉತ್ತರಾಧಿಕಾರಿ ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣ ಬಯಲಾಗುತ್ತಿದ್ದಂತೆ ಭಕ್ತ ವಲಯದಲ್ಲಿ ಆಕ್ರೋಶ ಹೆಚ್ಚಿದೆ. ಕಾವಿ ಹಾಕಿಕೊಂಡಿರುವ ಕಾಮಿ ಸ್ವಾಮಿ ಪೀಠ ಬಿಟ್ಟು ತೊಲಗಬೇಕು ಎಂಬ ಆಗ್ರಹ ಕೇಳಿ ಬರ್ತಿದೆ. ಗ್ರಾಮಸ್ಥರು, ಭಕ್ತರು ಮತ್ತು ಮಠದ ಟ್ರಸ್ಟ್ನ ಪದಾಧಿಕಾರಿಗಳು ನಿನ್ನೆಯಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ರಾಸಲೀಲೆಯಲ್ಲಿ ಭಾಗಿಯಾಗಿರುವ ದಯಾನಂದ ಸ್ವಾಮಿ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾನೆ ಅನ್ನೋ ಸಂಶಯಗಳು ವ್ಯಕ್ತವಾಗುತ್ತಿವೆ.ಮಠದ ನೂರಾರು ಕೋಟಿ ರೂ. ಮೌಲ್ಯದ ಆಸ್ತಿಯ