ಹಾವೇರಿ : ಉಪಚುನಾವಣೆಗೆ ಮುನ್ನವೇ ರಾಣಿಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ಅವರ ವಾಗೀಶ್ ನಗರ 6ನೇ ಕ್ರಾಸ್ ಬಳಿ ಇರುವ ಮನೆಯಲ್ಲಿ 10 ಕೋಟಿ ಅಕ್ರಮ ಹಣ, ಮದ್ಯ ಇಟ್ಟಿರುವುದಾಗಿ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನಲೆಯಲ್ಲಿ 20ಕ್ಕೂ ಹೆಚ್ಚು ಅಬಕಾರಿ ಹಾಗೂ ಐಟಿ ಅಧಿಕಾರಿ ರಾತ್ರಿ 10 ಗಂಟೆ ಸುಮಾರಿಗೆ ದಿಢೀರ್ ದಾಳಿ ನಡೆಸಿದ್ದಾರೆ.