ಮಹಾಮಾರಿ ಕೊರೊನಾ ಹೆಸರು ಕೇಳಿದರೆ ಎಂಥವರ ಎದೆಯೂ ಒಂದು ಕ್ಷಣ ನಡಗುತ್ತದೆ. ಆದ್ರೆ ತಬ್ಲಿಘಿಗಳು ಕೊರೊನಾ ಬಂದಿದ್ದಕ್ಕೆ ಡ್ಯಾನ್ಸ್ ಮಾಡಿದ್ದಾರೆ. ಬೆಳಗಾವಿ ಆಸ್ಪತ್ರೆಯಲ್ಲಿ ದೆಹಲಿಯಲ್ಲಿ ನಡೆದ ಜಮಾತ್ ನಲ್ಲಿ ಪಾಲ್ಗೊಂಡು ಮರಳಿ ಬಂದವರು ತಮಗೆ ಕೊರೊನಾ ವೈರಸ್ ಹರಡಿದೆ ಅಂತೆಲ್ಲಾ ಡ್ಯಾನ್ಸ್ ಮಾಡಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ದೆಹಲಿ ನಿಜಾಮುದ್ದಿನ್ ಮಸೀದಿಯಿಂದ ಬಂದವರನ್ನು ಇರಿಸಲಾಗಿದೆ. ಆದರೆ ಕ್ವಾರಂಟೈನ್ ನಲ್ಲಿರುವ ತಬ್ಲಿಘಿಗಳು ಡ್ಯಾನ್ಸ್ ಮಾಡುತ್ತಾ, ವೈದ್ಯ ಸಿಬ್ಬಂದಿಗೆ ಕಿರುಕುಳ ನೀಡತೊಡಗಿದ್ದಾರೆ.