ತಹಶೀಲ್ದಾರ್ ಹತ್ಯೆಗೆ ಯತ್ನಿಸಿದ್ದ ಜೆಸಿಬಿ ಚಾಲಕನನ್ನು ಬಂಧಿಸಲಾಗಿದೆ. ಗಣೇಶ್ ಬಂಧಿತ ಆರೋಪಿ. ಘಟನೆ ಕುರಿತು ಕನಕಪುರ ತಹಶೀಲ್ದಾರ್ ಆರ್. ಯೋಗಾನಂದ ಅವರು ಹಾರೋಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಯಿತು. ರಾಮನಗರದ ತಟ್ಟೆಕೆರೆ ಗ್ರಾಮದ ಜಮೀನೊಂದರಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಕುರಿತು ಖಚಿತ ಮಾಹಿತಿ ಪಡೆದ ಕನಕಪುರ ತಹಶೀಲ್ದಾರ್ ಯೋಗಾನಂದ ತಮ್ಮ ಸಿಬ್ಬಂದಿ ಜತೆಯಲ್ಲಿ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಜೆಸಿಬಿ ಚಾಲಕ, ಯೋಗಾನಂದ ಅವರ