ಚಿತ್ರದುರ್ಗ : ದಿನ ಕಳೆದಂತೆ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ಕೂಡ ಹಲವು ತಿರುವು ಪಡೆಯುತ್ತಿದೆ. ಶ್ರೀಗಳ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆಗೆ ಆಮಿಷ ಒಡ್ಡಿದ ಆರೋಪ ಕೇಳಿ ಬಂದಿದೆ.ಆಮಿಷ ಒಡ್ಡಿರುವ ಬಗ್ಗೆ ವಿಸೃತ ತನಿಖೆ ನಡೆಸುವಂತೆ ಕೋರಿ ಒಡನಾಡಿ ಸಂಸ್ಥೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದಿದೆ. ಸಂತ್ರಸ್ತ ಬಾಲಕಿಗೆ ಆಕೆಯ ತಂದೆ ಬಾಲ ಭವನದ ದೂರವಾಣಿಗೆ ಕರೆ ಮಾಡಿದ್ರು. ಸ್ವಾಮಿಗಳು ನಮ್ಮನ್ನು ನೋಡಿಕೊಂಡಿದ್ದಾರೆ.