ತಾಲಿಬಾನ್ ಹಿಡಿತದಲ್ಲಿ ಆಫ್ಘಾನಿಸ್ತಾನ: ಶೀಘ್ರದಲ್ಲೇ ಪೂರ್ಣ ವಶ?

bengaluru| Geethanjali| Last Modified ಬುಧವಾರ, 21 ಜುಲೈ 2021 (17:13 IST)
ಆಫ್ಘಾನಿಸ್ತಾನದಲ್ಲಿ ಶೇ.85ರಷ್ಟು ಹಿಡಿತ ಸಾಧಿಸಿದ್ದೇವೆ. ಇನ್ನೂ ಶೇ.15ರಷ್ಟನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳುತ್ತೇವೆ ಎಂದು ಇಸ್ಲಾಮಿಕ್ ಉಗ್ರ ಸಂಘಟನೆ ತಾಲಿಬಾನ್ ಹೇಳಿದೆ.
ತಾಲಿಬಾನ್ ವಕ್ತಾರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ಪಾಕಿಸ್ತಾನ ಬೆಂಬಲ ಪಡೆದಿಲ್ಲ. ನಮ್ಮ ಸ್ವ ಶಕ್ತಿಯಿಂದ ಇದನ್ನು ಸಾಧಿಸಿದ್ದೇವೆ ಎಂದರು.
ಮಹಿಳೆಯರು ತಾಲಿಬಾನ್ ಅಧಿಕಾರಕ್ಕೆ ಬರುವುದರಿಂದ ಆತಂಕಕ್ಕೆ ಒಳಗಾಗಿದ್ದಾರಲ್ಲಾ ಎಂಬ ಪ್ರಶ್ನೆಗೆ, ಈ ರೀತಿ ಭಾವಿಸುವುದು ಸರಿಯಲ್ಲ. ನಾವು ಮಹಿಳೆಯರಿಗೆ ಸಿಗಬೇಕಾದ ಎಲ್ಲಾ ರೀತಿಯ ಹಕ್ಕನ್ನು ನೀಡಲಿದ್ದೇವೆ ಎಂದು ಅವರು ಹೇಳಿದರು.




ಇದರಲ್ಲಿ ಇನ್ನಷ್ಟು ಓದಿ :