ಲಾಕ್ ಡೌನ್ ಮುಂದುವರಿಸುವುದರ ಬಗ್ಗೆ ಚರ್ಚೆ; ಇಂದು ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ

ಬೆಂಗಳೂರು| pavithra| Last Modified ಗುರುವಾರ, 9 ಏಪ್ರಿಲ್ 2020 (09:40 IST)
ಬೆಂಗಳೂರು : ಲಾಕ್ ಡೌನ್ ಮುಂದುವರಿಸುವ ವಿಚಾರದ ಕುರಿತು ಚರ್ಚೆ ನಡೆಸಲು ಇಂದು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.
> ಕೆಲವು ರಾಜ್ಯಗಳಲ್ಲಿ ಏ.14ರ ನಂತರ ಲಾಕ್ ಡೌನ್ ಮುಂದುವರಿಸುವುದಾಗಿ ನಿರ್ಧರಿಸಲಾಗಿತ್ತು. ಅದೇರೀತಿ ಇದೀಗ ಕರ್ನಾಟಕದಲ್ಲಿಯೂ ಏ.14ರ ನಂತರ ಲಾಕ್ ಡೌನ್ ಮುಂದುವರಿಸಬೇಕೆ? ಬೇಡವೇ ಎಂಬ ಬಗ್ಗೆ ನಿರ್ಧರಿಸಲು ಇಂದು ಬೆಳಿಗ್ಗೆ 11 ಗಂಟೆಗೆ ಸಿಎಂ ಬಿಎಸ್ ವೈ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.>
ಕರ್ನಾಟಕದಲ್ಲಿ ಕೊರೊನಾ ಪೀಡಿತ ಜಿಲ್ಲೆಗಳಲ್ಲಿ ಮಾತ್ರ ಲಾಕ್ ಡೌನ್ ಮಾಡಲಾಗುವುದೇ? ಕೊರೊನಾ ರೋಗವಿಲ್ಲದ ಜಿಲ್ಲೆಗಳಲ್ಲಿ ಲಾಕ್ ಡೌನ್ ತೆಗೀತಾರಾ? ಕೆಎಸ್ ಆರ್ ಟಿಸಿ, ಖಾಸಗಿ ಬಸ್, ವಾಹನಗಳ ಓಡಾಟಕ್ಕೆ ಅನುಮತಿ? ಅಂಗಡಿ, ಮಳಿಗೆ, ಕಾರ್ಖಾನೆಗಳನ್ನು ತೆರೆಯಲು ಸರ್ಕಾರ ಒಪ್ಪಿಗೆ? ಈ ಬಗ್ಗೆ ಇವತ್ತೇ ಸಿಎಂ ಯಡಿಯೂರಪ್ಪ ಸರ್ಕಾರ ನಿರ್ಧಾರ ಮಾಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. 


ಇದರಲ್ಲಿ ಇನ್ನಷ್ಟು ಓದಿ :