ಬೀದರ್ : ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಪಾರ್ಲಿಮೆಂಟ್ನಿಂದ ನನ್ನನ್ನು ಅನರ್ಹ ಮಾಡಿದರು, ಮಾತನಾಡಲು ಮೈಕ್ ನೀಡಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾಲ್ಕಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾಲ್ಕಿ ಪಟ್ಟಣದಲ್ಲಿ ನಡೆದ ಜನ ಕ್ರಾಂತಿ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ. ಈ ಸರ್ಕಾರಕ್ಕೆ 40% ಕೊಡಬೇಕು. ಇಲ್ಲಾವಾದರೆ ನಿಮ್ಮ ಕೆಲಸಗಳು ಆಗಲ್ಲ. ಮೋದಿ