ವಿವಾಹ ಪ್ರಸ್ತಾವನೆ ನಿರಾಕರಿಸಿದ ಯುವತಿಯ ಭೀಕರ ಹತ್ಯೆ

ಕೊಯಿಮುತ್ತೂರ್| Rajesh patil| Last Modified ಗುರುವಾರ, 15 ಸೆಪ್ಟಂಬರ್ 2016 (19:26 IST)
ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ 23 ವರ್ಷದ ಯುವತಿಯನ್ನು ಭೀಕರವಾಗಿ ಹತ್ಯೆಗೈದ ಘಟನೆ ವರದಿಯಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ನಾಲ್ಕನೇಯ ಹತ್ಯೆಯಾಗಿದೆ.
ಧಾನ್ಯ ಎನ್ನುವ ಯುವತಿಯನ್ನು ಹತ್ಯೆ ಮಾಡಿದ 27 ವರ್ಷದ ಜಹೀರ್, ನಂತರ ತಾನು ಕೂಡಾ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಧಾನ್ಯಳನ್ನು ವಿವಾಹವಾಗುವಂತೆ ಆರೋಪಿ ಕೆಲ ತಿಂಗಳುಗಳಿಂದ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಆದರೆ, ಆತನ ಪ್ರಸ್ತಾವನೆಯನ್ನು ಆಕೆ ತಳ್ಳಿಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಪೋಷಕರು ಧಾನ್ಯಳನ್ನು ಕೇರಳ ಮೂಲದ ಯುವಕನೊಂದಿಗೆ ವಿವಾಹ ನಿಶ್ಚಯಿಸಿದ್ದು, ಮುಂದಿನ ತಿಂಗಳು ವಿವಾಹದ ದಿನಾಂಕ ನಿಗದಿಯಾಗಿತ್ತು. ಹೊರಗಡೆ ತೆರಳಿದ್ದ ಪೋಷಕರು ಮನೆಗೆ ಬಂದು ನೋಡಿದಾಗ ಮಗಳು ರಕ್ತದ ಮಡಿಲಲ್ಲಿ ಬಿದ್ದಿರುವುದು ಗೊತ್ತಾಗಿದೆ.


ಓಣಂ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಧಾನ್ಯ, ತನ್ನ ಭಾವಿಪತಿಯೊಂದಿಗೆ ದೇವಾಲಯಕ್ಕೆ ತೆರಳಿದ್ದಳು ಎನ್ನಲಾಗಿದೆ.ಯುವತಿಯನ್ನು ಹತ್ಯೆ ಮಾಡಿದ ನಂತರ ಆರೋಪಿ ಜಹೀರ್ ವಿಷ ಸೇವಿಸಿ ನೆರೆಯ ಜಿಲ್ಲೆಯಾದ ಪಲಕ್ಕಾಡ್‌ಗೆ ಬಸ್ ಮೂಲಕ ತೆರಳಿದ್ದನು. ನಂತರ ಪೊಲೀಸರು ಆತನನ್ನು ಪತ್ತೆ ಮಾಡಿದಾಗ ಆತನ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಹಾಡಹಗಲೇ ಜನನಿಬಿಡ ನುಂಗಂಬಾಕಂ ರೈಲ್ವೆ ನಿಲ್ದಾಣದಲ್ಲಿ ಸಾಫ್ಟ್‌ವೇರ್ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ಎನ್ನುವ ಯುವತಿಯನ್ನು ಹತ್ಯೆ ಮಾಡಲಾಗಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :