ತೌಕ್ತೆ ಅಬ್ಬರಕ್ಕೆ ಮುಳುಗಿದ ಮಲ್ಪನೆ ಕಿನಾರೆ: ಭೀತಿಯಲ್ಲಿ ಕರಾವಳಿ ಜನ

ಮಂಗಳೂರು| Krishnaveni K| Last Modified ಭಾನುವಾರ, 16 ಮೇ 2021 (09:14 IST)
ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಮಂಗಳೂರು, ಉಡುಪಿ, ಕಾರವಾರ ಸೇರಿದಂತೆ ಕರಾವಳಿ ಜನ ಭೀತಿಯಲ್ಲಿ ಕಳೆಯುವಂತಾಗಿದೆ.
 > ನಿನ್ನೆ ಬೆಳಿಗ್ಗೆಯಿಂದಲೇ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆಯಾಗುತ್ತಿದೆ. ಪರಿಣಾಮ ಕಡಲು ಉಕ್ಕಿ ಅಬ್ಬರಿಸುತ್ತಿದೆ.>   ಮಲ್ಪೆ ತೀರ ಪ್ರದೇಶ ಮುಳುಗಿ ಹೋಗಿದೆ. ಕಡಲ ಕಿನಾರೆಯಲ್ಲಿ ಭಾರೀ ಗಾತ್ರದ ಅಲೆಗಳಿಂದಾಗಿ ತೀರ ಪ್ರದೇಶದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಡಲ್ಕೊರೆತದಿಂದಾಗಿ ಹಲವು ಮನೆಗಳು ಅಪಾಯದಲ್ಲಿದೆ. ಇಲಾಖೆಯ ಪ್ರಕಾರ ಇನ್ನೂ ಮೂರು ದಿನ ಮಳೆ ಸುರಿಯುವ ಸಾಧ್ಯತೆಯಿದೆ.ಇದರಲ್ಲಿ ಇನ್ನಷ್ಟು ಓದಿ :