ತುಮಕೂರು: ಪ್ರವಾಸಕ್ಕೆ ತೆರಳಿದ್ದ ಕೊರಟಗೆರೆಯ ಬೊಮ್ಮಲದೇವಿ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರು ಮದ್ಯ ಕುಡಿಸಿದ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಪ್ರವಾಸ ಮುಗಿಸಿ ವಾಪಾಸಗುತ್ತಿದ್ದ ವೇಳೆ ವಿದ್ಯಾರ್ಥಿಗಳು ಬಸ್ನಲ್ಲಿ ಡ್ಯಾನ್ಸ್ ಮಾಡಿ ಸುಸ್ತಾಗಿದ್ದರು. ಈ ವೇಳೆ ಕುಡಿಯಲು ನೀರು ಕೇಳಿದಾಗ ಶಿಕ್ಷಕರಾದ ಸಚ್ಚಿದಾನಂದ್, ಶೇಕ್ ಮುಜಾಮಿಲ್ ಮತ್ತು ಧನ್ಸಿಂಗ್ ರಾಥೋಡ್ ಅವರು ಮದ್ಯ ಬೆರೆಸಿದ ನೀರನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ