ಅವಳಿಗೆ ವಯಸ್ಸಲ್ಲದ ವಯಸ್ಸು. ಇನ್ನೂ ಪ್ರಾಥಮಿಕ ಶಾಲೆಯನ್ನೇ ಮುಗಿಸಿಲ್ಲ. ಸುಂದರ ಭವಿಷ್ಯ ಕಂಡಿದ್ದ ಬಾಲಕಿಯ ಬಾಳಲ್ಲಿ ದಾರಿ ತೋರ ಬೇಕಿರೋ ಶಿಕ್ಷಕನೇ ತಪ್ಪು ಹಾದಿ ತೋರಿಸಿದ್ದಾನೆ. ಪರಿಣಾಮ ಈಗ ಆಕೆಯ ಬಾಳು ನರಕದಂತಾಗಿದೆ. ಅಪ್ರಾಪ್ತೆ ಬಾಲಕಿಯೊಬ್ಬಳಿಗೆ ಶಿಕ್ಷಕನೊಬ್ಬ ಕಾಮಪಾಠ ಹೇಳಿಕೊಟ್ಟು ತನ್ನ ಕಾಮಪುರಾಣ ಬಯಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ. 13 ವರ್ಷದ ಬಾಲಕಿಯನ್ನು ಎರಡ್ಮೂರು ತಿಂಗಳಿಂದ ನಿರಂತವಾಗಿ ಅತ್ಯಾಚಾರ ನಡೆಸಿರೋ ಶಿಕ್ಷಕನು, ಆ ಬಾಲಕಿ ಗರ್ಭಿಣಿಯಾಗಿದ್ದಾಳೆ ಅನ್ನೋ ವಿಷಯ ತಿಳಿದು ಓಡಿ ಹೋಗಿದ್ದಾನೆ.