Widgets Magazine

ನಾಡಗೀತೆ ಹಾಡೋವಾಗ ಮೂತ್ರಮಾಡಿದ ಶಿಕ್ಷಕರು ಸಸ್ಪೆಂಡ್

ಬೀದರ್| Jagadeesh| Last Modified ಶನಿವಾರ, 15 ಫೆಬ್ರವರಿ 2020 (17:59 IST)
ರಾಷ್ಟ್ರಗೀತೆ, ನಾಡಗೀತೆಗಳಿಗೆ ಗೌರವ ಕೊಡಿ ಅಂತ ಮಕ್ಕಳಿಗೆ ಹೇಳಬೇಕಿದ್ದ ಶಿಕ್ಷಕರೇ ಮಾಡಬಾರದ ಕೆಲಸ ಮಾಡಿ ಸಸ್ಪೆಂಡ್ ಆಗಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ನ ಹಿಪ್ಪಳಗಾಂವನಲ್ಲಿರೋ ಸರ್ಕಾರಿ ಶಾಲೆಯ ಶಿಕ್ಷಕ ವಿರೇಶ್ ಮತ್ತು ಗಂಗಾರಾಮ ತಾಂಡಾದಲ್ಲಿರೋ ಸರ್ಕಾರಿ ಶಾಲೆಯ ಶಿಕ್ಷಕ ವಿಜಯಕುಮಾರ್ ರಾಠೋಡ್ ನಾಡಗೀತೆ ಹಾಡೋವಾಗ ಮೂತ್ರ ಮಾಡ್ತಿದ್ದರು.

ಬೀದರ್ ನ ಪಶು ವಿವಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಾಡಗೀತೆಗೆ ಈ ಶಿಕ್ಷಕರು ಮಾಡಿದ್ದಾರೆ.
ಹೀಗಾಗಿ ನಾಡಗೀತೆಗೆ ಅವಮಾನಿಸಿದ ಶಿಕ್ಷಕರನ್ನು ಸಸ್ಪೆಂಡ್ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.


ಇದರಲ್ಲಿ ಇನ್ನಷ್ಟು ಓದಿ :