ಬೀದರ್ : ಮಗನ ಗೆಲುವಿಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಹಾಕಿದ ಘಟನೆ ಬೀದರ್ ಜಿಲ್ಲೆಯ ಚಿಟ್ಟಗುಪ್ಪ ದರ್ಗಾದಲ್ಲಿ ನಡೆದಿದೆ. ಹಜ್ರತ್ ಸಯ್ಯದ್ ಮಖ್ಬೂಬ್ ಹುಸೇನಿ ದರ್ಗಾಕ್ಕೆ ಪುತ್ರನ ಜೊತೆ ಭೇಟಿ ನೀಡಿದ ವೇಳೆ ಸಿ.ಎಂ ಇಬ್ರಾಹಿಂ ದರ್ಗಾದ ಗೋರಿಯ ಮುಂದೆ ನಿಂತು ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರು ಹಾಕಿದ್ದಾರೆ. 700 ಕಿಮೀ ದೂರದಿಂದ ಮಗ ಇಲ್ಲಿಗೆ ಬಂದಿದ್ದಾನೆ. ನನ್ನ ಮಗನನ್ನು ನೀನೇ ರಕ್ಷಿಸಬೇಕು.