ಮಂಗಳಮುಖಿಯರ ಹಾವಳಿಯಂತೂ ಇತ್ತೀಚೆಗೆ ಕೇಳೋ ಹಾಗೇ ಇಲ್ಲ ಬಿಡಿ.. ಅವ್ರಿಗೆ ಸರಿಯಾಗಿ ಕೆಲಸ ಸಿಕ್ಕಲ್ಲ, ಸರಿಯಾಗಿ ಬೆಲೆ ಕೊಡದೆ ಇರೋ ಈ ಸಮಾಜದಲ್ಲಿ ಬದುಕೋಕೆ ಕಷ್ಟ ಅಂತಾ ಅವ್ರು ಕೇಳ್ದಾಗ ಜನ ಅವ್ರಿಗೆ ಹಣ ಕೊಡೋದಲ್ದೆ ಆಶೀರ್ವಾದನೂ ಪಡೀತಾರೆ.. ಆದ್ರೆ ಕೇಳಿ ಪಡೆಯೋದನ್ನ ಬಿಟ್ಟು ಕೆಲ ಮಂಗಳಮುಖಿಯರು ಸುಲುಗೆ ಮಾಡೋಕೆ ಮುಂದಾಗಿದ್ದಾರೆ.. ಹೀಗೆ ನಗರದಲ್ಲಿ ಸುಲಿಗೆ ಮಾಡ್ತಿದ್ದ ಮೂವರು ಮಂಗಳಮುಖಿಯರು ಓರ್ವ ಅಟೋ ಡ್ರೈವರ್ ಸೇರಿ ನಾಲ್ವರನ್ನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.