ಕೊಲೆಗಡುಕನಾಗಿದ್ರೆ ಯಾರ ಕೊಲೆ ಮಾಡಿದ್ದೀನಿ ಹೇಳಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ವಿಪಕ್ಷ ನಾಯಕ ಈಶ್ವರಪ್ಪ, ಸಚಿವ ರಮೇಶ್ ಕುಮಾರ್ ಕೊಲೆಗಡುಕ, ರಾಕ್ಷಸ ಅದಕ್ಕೆ ಮಕ್ಕಳಿಲ್ಲವೆಂದು ಟೀಕೆ ಮಾಡಿದ್ದರು. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ರಮೇಶ್ ಕುಮಾರ್, ಈಶ್ವರಪ್ಪಗೆ ಮರೆವು ಹೆಚ್ಚಾಗುತ್ತಿದೆ. ನನಗೆ ಇಬ್ಬರು ಮಕ್ಕಳಿದ್ದಾರೆ ಎನ್ನುವುದನ್ನು ಅವರು ಮರೆತಿದ್ದಾರೆ. ನಮ್ಮ ರಾಜಕೀಯದಲ್ಲಿ