Widgets Magazine

ಅನರ್ಹ ಶಾಸಕನಿಂದ ಜೋರಾದ ಟೆಂಪಲ್ ರನ್

ಮಂಡ್ಯ| Jagadeesh| Last Modified ಗುರುವಾರ, 7 ನವೆಂಬರ್ 2019 (21:13 IST)
ಉಪಚುನಾವಣೆಗೆ ದಿನಗಣನೆ ಶುರುವಾಗಿರೋವಾಗಲೇ ಅನರ್ಹ ಶಾಸಕರು ಹಾಗೂ ಅವರ ಕುಟುಂಬದವರು ಟೆಂಪಲ್ ರನ್ ಶುರುವಿಟ್ಟುಕೊಂಡಿದ್ದಾರೆ.
 

ನಾರಾಯಣಗೌಡರ ಪತ್ನಿ, ಮಗಳು ಒಂದು ಕಡೆ ದೇವರಿಗೆ ಮೊರೆ ಹೋಗುತ್ತಿದ್ದರೆ ಮಗದೊಂದು ಕಡೆ ಅನರ್ಹ ಶಾಸಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
 
ಮಂಡ್ಯದ  ಚೌಡೇನಹಳ್ಳಿ ಗ್ರಾಮದಲ್ಲಿ ಮಹಾಕಾಳಿ ಶ್ರೀಲಕ್ಷ್ಮೀದೇವಿ ಅಮ್ಮನವರ ದೇವಸ್ಥಾನದ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ ಮತ್ತು ಗೋಪುರದ ಕಳಸಾರೋಹಣ ಸಮಾರಂಭದಲ್ಲಿ ಅನರ್ಹ ಶಾಸಕ ಭಾಗಿಯಾಗಿದ್ದರು.    
 
ಬೈ ಎಲೆಕ್ಷನ್ ನ್ನು ಗಂಭೀರವಾಗಿ ಪರಿಗಣಿಸಿರೋ ನಾರಾಯಣಗೌಡ ಕ್ಷೇತ್ರ ಸಂಚಾರ ಚುರುಕಿನಿಂದ ಮಾಡುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :