ಬೆಂಗಳೂರು : ಫಲಿತಾಂಶದ ಬೆನ್ನಲೇ ಸಿಎಂ ಯಡಿಯೂರಪ್ಪಗೆ ಸಂಪುಟ ವಿಸ್ತರಣೆಯ ಟೆನ್ಷನ್ ಶುರುವಾಗಿದೆ. ಬಿಎಸ್ ವೈ ಸಂಪುಟ ಸೇರಲು ಮೂಲ ಬಿಜೆಪಿ ಶಾಸಕರ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ನೂತನ ಶಾಸಕರ ಸೇರ್ಪಡೆ ಬಳಿಕ ಖಾಲಿ ಉಳಿಯಲಿರೋ ನಾಲ್ಕೈದು ಸ್ಥಾನಗಳಿಗೆ ಮೂಲ ಬಿಜೆಪಿ ಶಾಸಕರ ಲಾಬಿ ನಡೆಸುತ್ತಿದ್ದು, ಸಚಿವ ಸ್ಥಾನಗಳಿಗೆ ತಮ್ಮನ್ನ ಪರಿಗಣಿಸುವಂತೆ ಬಿಜೆಪಿ ಶಾಸಕರಾದ ಎಸ್.ಎ.ರಾಮದಾಸ್ , ಉಮೇಶ್ ಕತ್ತಿ ಸೇರಿದಂತೆ ಶಾಸಕರು ಸಿಎಂ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.