ಹಾಸನ : ತಡರಾತ್ರಿ ಜವರಾಯನ ಅಟ್ಟಹಾಸ ಮೆರೆದಿದ್ದು, ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆರೆಹಳ್ಳಿ ಬಳಿ ನಡೆದ ದುರಂತದಲ್ಲಿ ಲೋಕೇಶ್, ಲಕ್ಷ್ಮಿ ಹಾಗೂ ಲೋಕೇಶ್ ತಂಗಿಯ ಮಕ್ಕಳಾದ ಗಾನವಿ ಮತ್ತು ಲೇಖನ ಮೃತಪಟ್ಟಿದ್ದಾರೆ.ಈ ವೇಳೆ ಲೋಕೇಶ್ ಬೈಕ್ ಕಾರೇಹಳ್ಳಿ ಬಳಿ ರಸ್ತೆ ಬದಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯೊಡೆದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ