ಇರಾನ್ನಲ್ಲಿ ಹಿಜಾಬ್ ವಿರೋಧಿ ಹೋರಾಟಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ ಷಿಯಾ ಮುಸ್ಲಿಂ ಸಮುದಾಯದ ಪ್ರಮುಖ ಯಾತ್ರಾ ಸ್ಥಳ ‘ಷಾ ಚೆರಾಗ್’ ಮಸೀದಿಯ ಮೇಲೆ ಭೀಕರ ಭಯೋತ್ಪಾದನಾ ದಾಳಿ ನಡೆದಿದೆ. ಅಪರಿಚಿತ ಬಂದೂಕುಧಾರಿ ಅಡ್ಡಾದಿಡ್ಡಿ ಗುಂಡು ಹಾರಿಸಿದಾಗ 15 ಮಂದಿ ಸ್ಥಳದಲ್ಲಿಯೇ ಮೃತಪಟ್ಟರು. ‘ಷಾ ಚೆರಾಗ್’ ಮಸೀದಿಯಲ್ಲಿ ಷಿಯಾ ಸಮುದಾಯದ 8ನೇ ಧರ್ಮಗುರು ಇಮಾಮ್ ರೆಜಾ ಅವರ ಸಮಾಧಿ ಇದೆ. ಇದು ದಕ್ಷಿಣ ಇರಾನ್ನ ಪವಿತ್ರ ಯಾತ್ರಾಸ್ಥಳ ಎಂದು ಹೆಸರುವಾಸಿಯಾಗಿದೆ.