ಪುಲ್ವಾಮಾದಲ್ಲಿ ಅಟ್ಟಹಾಸ ಮೆರೆಯಲು ಉಗ್ರರು ಯತ್ನಿಸಿದ್ದಾರೆ. ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಭಾರತೀಯ ಯೋಧರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ಉಗ್ರರಿಗೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಆರೇಳು ಸುತ್ತು ಗುಂಡು ಉಗ್ರರತ್ತ ಹಾರಿಸಿದೆ ಎನ್ನಲಾಗಿದೆ.ಉಗ್ರರು ಇರೋ ಪ್ರದೇಶದವನ್ನ ಭಾರತೀಯ ಸೇನೆ ಸುತ್ತುವರೆದಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಉಗ್ರರ ಉಪಟಳಕ್ಕೆ ಪ್ರತ್ಯುತ್ತರ ಕೊಡಲು ಭಾರತೀಯ ಸೇನೆ ಸಜ್ಜಾಗಿದೆ.